Ads

Saturday, July 28, 2018

 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 100 ಸಾಮಾನ್ಯ ಜ್ಞಾನ ಪ್ರಶ್ನೆಗಳು*                                 
1) ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು?
* ಇಂಡೋನೇಷಿಯಾ.
2) “ಪ್ಯಾದಮ್” ಎಂದರೆ——.
* ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆಯ ಮಾನ.
3) “ಐಯೋ” ಇದು ಯಾವ ಗ್ರಹದ ಉಪಗ್ರಹ?
* ಗುರು.
4) ಪೂರ್ವ ಕರಾವಳಿಯನ್ನು ಯಾವ ತೀರ ಎನ್ನುವರು.
* ಕೋರಮಂಡಲ.
5) “ಮರ್ರೆ” ನದಿ ಯಾವ ಖಂಡದಲ್ಲಿದೆ?
* ಆಸ್ಟ್ರೇಲಿಯಾ.
6) ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?
* ಚಿಲಿ.
7) “ಸಿಲೇರು” ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
* ಆಂಧ್ರಪ್ರದೇಶ.
8) ಉಷ್ಣವಲಯದಲ್ಲಿರದ ಖಂಡ ಯಾವುದು?
* ಯುರೋಪ್.
9) ಟೈಟಾನ್ ಯಾವ ಗ್ರಹದ ಉಪಗ್ರಹ?
* ಶನಿ
10) ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?
* ಆರ್ಕ್ ಟಿಕ್ ಸಾಗರ
11) “ಕೋಸಿ” ಯಾವ ನದಿಯ ಉಪನದಿ?
* ಗಂಗಾ ನದಿಯ.
12) “ಹಣ್ಣುಗಳ ನಾಡು” ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?
* ಮೆಡಿಟರೇನಿಯನ್.
13) “ಕಿಕುಯಸ್” ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?
* ಕೀನ್ಯಾ.
14) “ವೆಸುವಿಯನ್” ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?
* ಇಟಲಿ.
15) ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
* ಸುಪೀರಿಯರ್.
15) “ಚಕ್ರ” ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
* ಕರ್ನಾಟಕ.
16) ‘ಕೆಂಪುಮಣ್ಣು’ ಕೆಂಪಾಗಿರಲು ಕಾರಣವೇನು?
* ಕಬ್ಬಿಣದ ಆಕ್ಸೈಡ್.
17) ಜಗತ್ತಿನಲ್ಲಿ ಅತಿದೊಡ್ಡ ಮತ್ತು ಆಳವುಳ್ಳ ಸಾಗರ ಯಾವುದು?
* ಫೆಸಿಫಿಕ್ ಸಾಗರ.
18) ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣು ಯಾವುದು?
* ಕಪ್ಪುಮಣ್ಣು.
19) ಬಹಳ ದಟ್ಟವಾದ ಕಾಡುಗಳು ಯಾವುವು?
* ನಿತ್ಯ ಹರಿದ್ವರ್ಣ ಕಾಡುಗಳು.
20) “ಒಬೆರಾನ್” ಯಾವ ಗ್ರಹದ ಉಪಗ್ರಹ?
* ಯುರೇನಸ್.
21) “ಮೌಂಟ್ ಪೀಲಿ” ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುವುದು?
* ವೆಸ್ಟ್‍ಇಂಡೀಸ್.
22) ಸುನಾಮಿಗಳು ಸಾಮಾನ್ಯವಾಗಿ ಹುಟ್ಟುವ ಸ್ಥಳ ಯಾವುದು?
* ಸಾಗರದ ಆಳ.
23) ಭಾರತದ ಟರ್ಮಿನಲ್ ಬಂದರು ಯಾವುದು?
* ಕೊಲ್ಕತ್ತಾ.
24) “ತೆಹರಿ ಅಣೆಕಟ್ಟು” ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
* ಭಾಗೀರಥಿ.
25) “ಕಾಮರಾಜ್” ಬಂದರು ಯಾವ ರಾಜ್ಯದಲ್ಲಿದೆ?
* ತಮಿಳುನಾಡು ( ಇನ್ನೊಂದು ಹೆಸರು ಎನ್ನೋರ್).
26) “ಡೌನ್ಸ್” ಯಾವ ದೇಶದ ಉಷ್ಣವಲಯದ ಹುಲ್ಲುಗಾವಲು?
* ಆಸ್ಟ್ರೇಲಿಯಾ.
27) ಭೂಗೋಳದ ಅತಿ ಎತ್ತರವಾದ ಖಂಡ ಯಾವುದು?
* ಅಂಟಾರ್ಟಿಕಾ.
28) “ಭೂ ಕೇಂದ್ರ ಸಿದ್ದಾಂತ” ಮಂಡಿಸಿದವರು ಯಾರು?
* ಟಾಲಮಿ.
29) ಉಕ್ಕಿನ ಕಾರ್ಖಾನೆ “ರೂರ್ಕೆಲಾ” ಯಾವ ರಾಜ್ಯದಲ್ಲಿದೆ?
* ಒರಿಸ್ಸಾ.
30) ಭೂಮಿಗೆ ಮೊದಲು ಬಂದು ತಲುಪುವ ಭೂಕಂಪದ ಅಲೆಗಳು ಯಾವುವು?
* ಪಿ. ಅಲೆಗಳು.
31) “ಕಾಜಿರಂಗ ರಾಷ್ಟ್ರೀಯ ಉದ್ಯಾನವನ” ಯಾವ ರಾಜ್ಯದಲ್ಲಿದೆ?
* ಅಸ್ಸಾಂ.
32) ಮರಿ ಹುಲಿಗಳು ಎಂದು ಖ್ಯಾತವಾದ ದೇಶಗಳು ಯಾವು?
* ಮಲೇಶಿಯಾ ಮತ್ತು ಥೈಲ್ಯಾಂಡ್.
33) “ಯೂರೋಪ್ ನ ಬೆನ್ನೆಲುಬು” ಯಾವ ನದಿ?
* ರೈನ್.
34) “ರೈತರ ಯೂರೋಪ್” ಎಂದು ಯಾವ ನದಿಯನ್ನು ಕರೆಯುತ್ತಾರೆ?
* ಡಾನ್ಯೂಬ್.
35) ಬಸಾಲ್ಟ್ ಶಿಲೆಯು ಯಾವ ಶಿಲೆಯಾಗಿದೆ?
* ಬಹಿರಾಗ್ನಿ.
36) ಜಗತ್ತಿನ ದೊಡ್ಡ ನದಿ ದ್ವೀಪ ಯಾವುದು?
* ಮರಾಜೋ (ಇದನ್ನು ನಿರ್ಮಿಸುವ ನದಿ ಅಮೇಜಾನ್).
37) “ನಾಳ್” ಸಿಹಿ ನೀರಿನ ಸರೋವರ ಎಲ್ಲಿದೆ?
* ಗುಜರಾತ್.
38) “ಇಂದಿನ ಮಗು ಮುಂದಿನ ಪ್ರಜೆ” ಎಂದು ಈ ಹೇಳಿಕೆ ನೀಡಿದವರು ಯಾರು?
* ಜವಾಹರ್ ಲಾಲ್ ನೆಹರು.
39) ‘ಮುಂಜಾನೆಯ ನಕ್ಷತ್ರ’ ಯಾವುದು?
* ಶುಕ್ರ.
40) ಯುರೋಪಿನ ಷಡ್ಬಜಾಕೃತಿ ದೇಶ ಯಾವುದು?
* ಫ್ರಾನ್ಸ್.
41) ಹಂಗೇರಿಯಾದ ಉಷ್ಣವಲಯದ ಹುಲ್ಲುಗಾವಲು ಯಾವುದು?
* ಪುಷ್ಟೀಸ್.
42) ಯಾವುದು ‘ಸಾಗರೀಕ ವಲಯದ ಮೇಲ್ಪದರು’ ಎಂದು ಕರೆಯಲ್ಪಟ್ಟಿದೆ?
* ಸೀಮಾ.
43) ಭೂಪದರ ಮೇಲ್ಮೈನ ಸರಾಸರಿ ಉಷ್ಣತೆಯು — ಡಿಗ್ರಿ ಸೆಂ.ಗ್ರೆ.
* 14.
44) “ಸೂರ್ಯ ಸಿದ್ದಾಂತ” ಮಂಡಿಸಿದವರು?
* ಕೋಪರ್ ನಿಕಸ್.
45) ಕಾರ್ಗಿಲ್ ಪ್ರದೇಶವು ಯಾವ ಎರಡು ರಾಷ್ಟ್ರಗಳ ನಡುವೆ ಇದೆ?
* ಭಾರತ ಮತ್ತು ಪಾಕಿಸ್ತಾನ.
46) “ಬಿಂಡಿಬಸ್” ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?
* ಆಸ್ಟ್ರೇಲಿಯಾ.
47) ಯೂರೋಪಿನ ಅತಿ ಉದ್ದವಾದ ನದಿ ಯಾವುದು?
* ವೋಲ್ಗಾ.
48) ಸಮಭಾಜಕ ವೃತ್ತವು ಯಾವ ಖಂಡದ ಮಧ್ಯೆ ಹಾದು ಹೋಗುತ್ತದೆ?
* ಆಫ್ರಿಕಾ.
49) ಗ್ರಾನೈಟ್, ಗಾಬ್ರೋ ಶಿಲೆಗಳು —- ಶಿಲೆಗಳಾಗಿವೆ?
* ಅಂತರಾಗ್ನಿ.
50) ಸಮಾನ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ ಯಾವುದು?
* ಐಸೋಬಾರ್ಸ್.
51. ಸಿಮೆಂಟ್ ಎಂಬ ಪದವು ಯಾವ ಭಾಷೆಯ ಮೂಲದಿಂದ ಬಂದಿದೆ?
* ರೋಮನ್.
52. ಕೆಪ್ಲರ್ ನ ಮೊದಲ ನಿಯಮ ತಿಳಿಸಿ?
* ಸೂರ್ಯನು ಎಲಿಪ್ಸಿಯಾದ ಕೇಂದ್ರವಾಗಿರದೇ ಅದೇ ನೇರದಲ್ಲಿರುವ ಒಂದು ಬಿಂದುವಾಗಿದೆ.
53. ವಿಜ್ಞಾನದ ಪಿತಾಮಹ ಯಾರು?
* ರೋಜರ್ ಬೇಕನ್.
54. ಪ್ರಥಮವಾಗಿ ದೂರದರ್ಶಕದ ಮಾದರಿ ತಯಾರಿಸಿದವನು ಯಾರು?
* ಜಾನ್ ಲಿಪ್ಪರ್ ಷೇ (1608).
55. 1609 ರಲ್ಲಿ ದೂರದಲ್ಲಿರುವ ಆಕಾಶ ಕಾಯಗಳನ್ನು ನೋಡಲು ದೂರದರ್ಶಕವನ್ನು ರಚಿಸಿದವನು ಯಾರು?
* ಗೆಲಿಲಿಯೋ.
56.ಪ್ರೌಢ ಸ್ತ್ರೀಯರಲ್ಲಿ ನಿಯತವಾಗಿ ಸಂತಾನೋತ್ಪತ್ತಿಯ ಚಕ್ರವು ಎಷ್ಟು ದಿನಗಳವರೆಗೂ ವ್ಯಾಪಿಸಿದೆ?
* 28.
57. ಮಾನವನ ಭ್ರೂಣದ ಅವಧಿ ತಿಳಿಸಿರಿ?
* ಸುಮಾರು 38 ರಿಂದ 40 ವಾರಗಳು ಅಥವಾ 280 ದಿನಗಳು.
58. ಯಾವ ರಾಜ್ಯದಲ್ಲಿ ಅತಿಹೆಚ್ಚು ಹೆಣ್ಣು ಭ್ರೂಣ ಹತ್ಯೆಯಾಗಿವೆ?
* ಹರಿಯಾಣ
59. ಭಾರತದ ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಯಾರು?
* ಡಾ.ಸುಭಾಷ್ ಮುಖ್ಯೋಪಾಧ್ಯಾಯ.                        60. ಪ್ರಪಂಚದ ಮೊದಲ ಪ್ರನಾಳಶಿಶು ಯಾವುದು?
* ಲೂಯಿಸ್ ಬ್ರೌನ್.                                   61. ಆಧುನಿಕ ಗಣಕಯಂತ್ರದ ಪಿತಾಮಹ ಯಾರು?
* ಚಾಲ್ಸ್ ಬ್ಯಾಬೇಜ್.
62. ಸಿ ಪಿ ಯು ವಿವರಿಸಿರಿ?
* ಸೆಂಟ್ರಲ್ ಪ್ರೋಸಸಿಂಗ್ ಯುನಿಟ್.
63. ಭಾರತದ ಮೊದಲ ಪ್ರನಾಳಶಿಶು ಯಾವುದು?
* ದುರ್ಗಾ (ಕನುಪ್ರಿಯ ಅಗರ್ ವಾಲ್).
64. ಐ .ವಿ .ಎಫ್ ನಿಂದ ದುರ್ಗಾಳನ್ನು ಸೃಷ್ಟಿಸಿದವರು ಯಾರು?
* ಡಾ. ಸುಭಾಷ್ ಮುಖ್ಯೋಪಾಧ್ಯಾಯ.
65. ಪ್ರತಿ ನಿಮಿಷ ಹೃದಯವು ಸುಮಾರು ಎಷ್ಟು ಲೀಟರ್ ನಷ್ಟು ರಕ್ತವನ್ನು ಪಂಪ್ ಮಾಡುತ್ತದೆ?
* 5 ಲೀಟರ್
66. ಎಲೆಕ್ಟ್ರಿಕಾ ಎಂಬ ಪದವನ್ನು ಹುಟ್ಟು ಹಾಕಿದವನು ಯಾರು?
* ಡಾ.ವಿಲಿಯಂ ಗಿಲ್ ಬರ್ಟ್ ( 1600 ರಲ್ಲಿ)
67. ರಣಥಂಭೋರ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
68. ಬಿಳಿ ಹುಲಿ ಕಂಡು ಬರುವ ಒರಿಸ್ಸಾದ ರಾಷ್ಟ್ರೀಯ ಉದ್ಯಾನವನ ಯಾವುದು?
* ನಂದನ್-ಕಾನನ್.
69. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ.
*ಕಬ್ಭಿಣ
70. ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯದ ಹೆಸರೇನು?
* ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ.
71. ಪ್ರಪ್ರಥಮ ಹವಾಮಾನ ಉಪಗ್ರಹ ಯಾವುದು?
* ಟೈರೊಸ್
72.ಯೋಗದ ಕಲ್ಪನೆ ಮತ್ತು ಮೂಲನಿಯಮಗಳು ಕೊಟ್ಟ ಪ್ರಥಮ ವ್ಯಕ್ತಿ ಯಾರು?
* ಪತಂಜಲಿ
73. ಕೀಟಗಳ ಶಾಸ್ತ್ರೀಯ ಅಧ್ಯಯನ ಮಾಡಿದ ಪ್ರಥಮ ವಿಜ್ಞಾನಿ ಯಾರು?
*ಅರಿಸ್ಟಾಟಲ್
74.ಚಂದ್ರನನ್ನು ತಾಗಿದ ಮೊದಲ ಬಾಹ್ಯಾಕಾಶ ರಾಕೆಟ್ ಯಾವುದು?
* ಲ್ಯೂನಿಕ್ -2
79. ಒಜೋನ್ ಎನ್ನುವುದು ಈ ಒಂದು ಅನಿಲದ ರೂಪವಾಗಿದೆ?
* ಆಮ್ಲಜನಕ
80. ಸ್ನಾನಕ್ಕೆ ಬಳಸುವ ಸಾಬೂನಿನಲ್ಲಿರುವುದು ಯಾವ ಲೋಹದ ಲವಣವಾಗಿದೆ?
* ಪೋಟಾಷಿಯಂ
81. ಸೌರ ವಿಕಿರಣದ ಮೂರನೇ ಒಂದು ಭಾಗವು ಯಾವ ವಿಕಿರಣಗಳಿಂದ ಕೂಡಿದೆ?
* ಅವಕೆಂಪು
82. ಸೌರಕೋಶವನ್ನು ಯಾವ ವಸ್ತುಗಳಿಂದ ಮಾಡಿರುತ್ತಾರೆ?
* ಸಿಲಿಕಾನ್
83. ಅನುವಂಶೀಯತೆ ಮತ್ತು ಭಿನ್ನತೆಯ ಬಗ್ಗೆ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆ ಯಾವುದು?
* ತಳೀಶಾಸ್ತ್ರ
84. ಸಾಯುವವರೆಗೂ ಬೆಳೆಯುವ ಜೀವಿ ಯಾವುದು?
* ಮೊಸಳೆ
85. ಆಯುರ್ವೇದದ ಪಿತಾಮಹಾ ಯಾರು?
* ಚರಕ
86. ಇಲಿಗಳ ಮೂಲಕ ಹರಡುವ ರೋಗ ಯಾವುದು?
* ಪ್ಲೇಗ್
87. ಆಹಾರವಾಗಿ ಬಳಸಲ್ಪಡುವ ಶೀಲಿಂದ್ರ ಯಾವುದು?
* ಅಣಬೆ
89. ನಮ್ಮ ದೇಹದ ಅತಿ ದೊಡ್ಡ ಗ್ರಥಿ ಯಾವುದು?
* ಯಕೃತ್ತು
90. ಶ್ವಾಸಕೋಶಗಳಿಂದ ಆಮ್ಲಜನಕವನ್ನು ಸಾಗಾಣಿಕೆ ಮಾಡುವ ರಕ್ತದ ಘಟಕ ಯಾವುದು?
* ಹಿಮೋಗ್ಲೋಬಿನ್
91. ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ಯಾವುದು?
* ಸಯೋನೋಸಿಸ್
92. ಚಿಕನ್‍ಗುನ್ಯ ಹರಡುವ ಜೀವಿ ಯಾವುದು?
* ಈಡಿಸ್ ಈಜಿಪ್ಟ್
93. ಕ್ಷಯ ರೋಗವು ಈ ಅಂಗವನ್ನು ನಾಶಮಾಡುತ್ತದೆ?
* ಶ್ವಾಶಕೋಶ
94. ರೇಬಿಸ್ ರೋಗಕ್ಕೆ ಕಾರಣವಾದ ವೈರಸ್ ಯಾವುದು?
* ರ್ಯಾಬ್ಡೋವಿರಿಡೆ
95. ಯಾವಾಗ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಯಿತು?
* 1996
96,. 2 ಕೋಣೆಗಳ ಹೃದಯವನ್ನು ಹೊಂದಿರುವ ಜೀವಿಗಳು ಯಾವುವು?
*ಮೀನುಗಳ
97. ಮಾನವ ಉಪಯೋಗಿಸಿದ ಮೊದಲ ದ್ರಾವಕ ಯಾವುದು?
* ನೀರು
98. ದ್ರವ್ಯದ ನಾಲ್ಕನೇ ಸ್ಥಿತಿ ಯಾವುದು?
* ಪ್ಲಾಸ್ಮಾ
99. ರಾಸಾಯನಿಕ ಸಂಕೇತಗಳನ್ನು ಮೊದಲು ಪರಿಚಯಿಸಿದವನು ಯಾರು ?
* ಜಾನ್ ಡಾಲ್ಟನ್
100. ದ್ರಾವಣವು ಇವೆರಡರ ಮಿಶ್ರಣವಾಗಿದೆ?
* ದ್ರಾವ್ಯ ಮತ್ತು ದ್ರಾವಕ

No comments:

Post a Comment